ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಹಾರ್ಮುಜ್ ಮತ್ತೆ ಬಂದ್‌; ಇರಾನ್‌ನ 140 ಗುರಿಗಳ ಮೇಲೆ ಅಮೆರಿಕ ದಾಳಿ

Kaverinews | Published on: | Views: 33
ಅಂತರಾಷ್ಟ್ರೀಯ
ಹಾರ್ಮುಜ್ ಮತ್ತೆ ಬಂದ್‌; ಇರಾನ್‌ನ 140 ಗುರಿಗಳ ಮೇಲೆ ಅಮೆರಿಕ ದಾಳಿ
ಟೆಹ್ರಾನ್: ಹಾರ್ಮುಜ್‌ ಜಲಸಂಧಿಯನ್ನು (Strait of Hormuz) ಮತ್ತೆ ಬಂದ್‌ ಮಾಡಿದ ಬೆನ್ನಲ್ಲೇ ಇರಾನ್‌ನ 140 ಗುರಿಗಳ ಮೇಲೆ ಅಮೆರಿಕ (US) ದಾಳಿ ನಡೆಸಿದೆ.

ಇದಕ್ಕೆ ಪ್ರತಿಯಾಗಿ ಇರಾನ್‌ (Iran) ಕೂಡ ಯುಎಇ, ಕತಾರ್‌ ಮೇಲೆ ದಾಳಿ ಮಾಡಿದೆ. ವಿಶ್ವದ ಅತ್ಯಂತ ಪ್ರಮುಖ ಇಂಧನ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ʼಮುಂದಿನ ಸೂಚನೆ ಬರುವವರೆಗೆ ಮುಚ್ಚುವುದಾಗಿʼ ಇರಾನ್‌ ಘೋಷಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಮುಂಜಾನೆ ಇರಾನ್ ಮೇಲೆ ಅಮೆರಿಕ ಹೊಸ ಸುತ್ತಿನ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನಗೊಂಡಿದೆ. ಪ್ರತ್ಯುತ್ತರವಾಗಿ ಬಹ್ರೇನ್, ಕುವೈತ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸಿದೆ ʼಮುಂದಿನ ಸೂಚನೆ ಬರುವವರೆಗೂ ಮತ್ತು ಈ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪಗಳು ಕೊನೆಗೊಳ್ಳುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗುತ್ತದೆ. ಇಲ್ಲಿ ಯಾವುದೇ ಹಡಗುಗಳನ್ನು ಹಾದುಹೋಗಲು ಅನುಮತಿಸಲಾಗುವುದಿಲ್ಲʼ ಎಂದು ಇರಾನ್‌ ಹೇಳಿತ್ತು.


ಈ ಘೋಷಣೆಯ ಬೆನ್ನಲ್ಲೇ ಅಮೆರಿಕವು ಇರಾನ್ ಮೇಲೆ ತನ್ನ ಮೂರನೇ ಸುತ್ತಿನ ದಾಳಿಯನ್ನು ನಡೆಸಿದೆ. ಜಲಸಂಧಿ ಮೂಲಕ ಹಾದುಹೋಗುತ್ತಿದ್ದ ಸೈಪ್ರಸ್ ಧ್ವಜ ಹೊತ್ತ ಕಂಟೇನರ್ ಹಡಗಿನ ಮೇಲೆ ಇರಾನ್‌ ನಿರ್ದಯವಾಗಿ ದಾಳಿ ನಡೆಸಿದೆ ಎಂದು ಯುಎಸ್‌ ಆರೋಪಿಸಿದೆ

Share this article