ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ವಿಷಮುಕ್ತ ಕೃಷಿ ವಿಷಮುಕ್ತ ಆಹಾರ* ಬಗ್ಗೆ ಒಂದು ದಿನದ ಕಾರ್ಯಾಗಾರ

Kaverinews | Published on: | Views: 54
ಕುಶಾಲನಗರ
ವಿಷಮುಕ್ತ ಕೃಷಿ  ವಿಷಮುಕ್ತ ಆಹಾರ* ಬಗ್ಗೆ ಒಂದು ದಿನದ ಕಾರ್ಯಾಗಾರ
ಸಾವಯವ ಕೃಷಿಯ ಮಹತ್ವ ಮತ್ತು ನಾಟಿ ಬೀಜಗಳನ್ನು ಸಂಗ್ರಹಿಸಿ ಶೇಖರಿಸಿಡುವ ಹಾಗೂ ಅದನ್ನು ಕೆಡದಂತೆ ಹೇಗೆ ಸಂರಕ್ಷಿಸಿಡಬೇಕೆಂಬುವುದನ್ನು ತಿಳಿಸಲು ರೈತರಿಗಾಗಿ ಒಂದು ದಿನದ ಕಾರ್ಯಗಾರ ನಡೆಯಿತು.

ಸಾವಯವ ಕೃಷಿಯ ಮಹತ್ವ ಮತ್ತು ನಾಟಿ ಬೀಜಗಳನ್ನು ಸಂಗ್ರಹಿಸಿ ಶೇಖರಿಸಿಡುವ ಹಾಗೂ ಅದನ್ನು ಕೆಡದಂತೆ ಹೇಗೆ ಸಂರಕ್ಷಿಸಿಡಬೇಕೆಂಬುವುದನ್ನು ತಿಳಿಸಲು ರೈತರಿಗಾಗಿ ಒಂದು ದಿನದ ಕಾರ್ಯಗಾರ ನಡೆಯಿತು.

ಕುಶಾಲನಗರದ ಸಂಪನ್ಮೂಲ ವ್ಯಕ್ತಿಯಾಗಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ ಬಿ ಆಫ್ತಾಬ್ ಕುಶಾಲನಗರದ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು.

ಮೈಸೂರು ಜಿಲ್ಲೆಯ ಪೀಪಲ್ ಟ್ರಿ ಸಂಸ್ಥೆಯು ಎಚ್ ಡಿ ಕೋಟೆಯಿಂದ ಸುಮಾರು 55 ಜನ ರೈತರ ತಂಡದ ಸದಸ್ಯರಿಗೆ ನಾಟಿ ಬೀಜಗಳ ಮಹತ್ವ ಹಾಗೂ ಬೆಳೆ ಮಾಡುವ ಮತ್ತು ಬೀಜ ಸಂಗ್ರಹಿಸಿ ಅದನ್ನು ಶೇಖರಿಸಿಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮತ್ತು ವಿಚಾರ ಮಂಡನೆ ಹಾಗೂ ಸಂವಾದದ ಮೂಲಕ ಸಮಗ್ರವಾಗಿ ತಿಳಿಸಿಕೊಡಲಾಯಿತು. ಹೈಬ್ರಿಡ್ ಬೀಜಗಳ ಬಳಕೆಯಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಪರಸ್ಪರ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು.

Share this article