ಬುಲೆಟ್ ರೈಲಿನ ಮೊದಲ ವಿಭಾಗವು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. 508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ (Mumbai-Ahmedabad High-Speed Rail (MAHSR) corridor) ಅನ್ನು ಒಂದೇ ಬಾರಿಗೆ ತೆರೆಯುವ ಬದಲು ಹಂತ-ಹಂತವಾಗಿ ತೆರೆಯಲಾಗುವುದು. ಸೂರತ್-ಬಿಲಿಮೋರಾ ವಿಭಾಗವನ್ನ ಪ್ರಾರಂಭಿಸಿದ ನಂತರ, ಉಳಿದ ಮಾರ್ಗಗಳನ್ನ ಆರಂಭಿಸಲಾಗುತ್ತದೆ. ಮುಂದಿನ ವರ್ಷ ಸೂರತ್ ಮತ್ತು ಬಿಲಿಮೋರಾ ನಡುವಿನ ಬುಲೆಟ್ ರೈಲಿನ ಮೊದಲ ವಿಭಾಗವನ್ನ ಆರಂಭಿಸಲಿದ್ದೇವೆ. ಅದರ ನಂತರ ವಾಪಿಯಿಂದ ಸೂರತ್, ನಂತರ ವಾಪಿಯಿಂದ ಅಹಮದಾಬಾದ್, ಅಹಮದಾಬಾದ್ ನಿಂದ ಥಾಣೆ ಮತ್ತು ಅಹಮದಾಬಾದ್ ನಿಂದ ಮುಂಬೈಗೆ ಮಾರ್ಗಗಳನ್ನ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ. ರೈಲ್ವೆ ಸಚಿವಾಲಯವು ಅಶ್ವಿನಿ ಅವರ ಹೇಳಿಕೆಯ ವೀಡಿಯೊವನ್ನ ಜಾಲತಾಣದಲ್ಲಿ ಹಂಚಿಕೊಂಡಿದೆ.
ಭಾರತದ ಮೊದಲ ಬುಲೆಟ್ ರೈಲು ಯಾವಾಗ ಕಾರ್ಯ ಆರಂಭಿಸುತ್ತೆ?
Kaverinews
|
Published on:
|
Views: 49
ರಾಷ್ಟ್ರೀಯ