ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಕೇಳಿಕೊಂಡರೂ ಹಾಲೆಂಡ್‌ಗೆ ಚೆಂಡು ವರ್ಗಾಯಿಸಲು ನಿರಾಕರಣೆ;

Kaverinews | Published on: | Views: 44
ಕ್ರೀಡೆ
ಕೇಳಿಕೊಂಡರೂ ಹಾಲೆಂಡ್‌ಗೆ ಚೆಂಡು ವರ್ಗಾಯಿಸಲು ನಿರಾಕರಣೆ;

ಸಹ ಆಟಗಾರನ ಪ್ರಮಾದಕ್ಕೆ ದೊಡ್ಡ ಬೆಲೆತೆತ್ತ ನಾರ್ವೆ ನ್ಯೂಯಾರ್ಕ್: ನಾರ್ವೆ ಸ್ಟಾರ್‌ ಅಲೆಕ್ಸಾಂಡರ್‌ ಸೊರ್ಲೋತ್‌ (Alexander Sorloth) ಮಾಡಿದ ಪ್ರಮಾದದಿಂದ ಫಿಫಾ ವಿಶ್ವಕಪ್‌ (FIFA World Cup 2026) ಕ್ವಾರ್ಟರ್‌ ಫೈನಲ್‌ನಲ್ಲಿ ನಾರ್ವೆ ಮುಗ್ಗರಿಸಿ ಅತಿದೊಡ್ಡ ಬೆಲೆ ತೆತ್ತಿದೆ. ಶನಿವಾರ ನಡೆದ ಇಂಗ್ಲೆಂಡ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ತಂಡದ ಟಾಪ್‌ ಸ್ಕೋರರ್ ಎರ್ಲಿಂಗ್‌ ಹಾಲೆಂಡ್‌ಗೆ (Erling Haaland) ಚೆಂಡನ್ನು ಪಾಸ್‌ ಮಾಡಲು ನಿರಾಕರಿಸಿ ಅಲೆಕ್ಸಾಂಡರ್‌ ದೊಡ್ಡ ಬ್ಲಂಡರ್‌ ಮಾಡಿದರು. ಆಟಗಾರನ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪಂದ್ಯಾವಳಿಯಲ್ಲಿ 1-0 ಮುನ್ನಡೆಯಲ್ಲಿದ್ದ ನಾರ್ವೆ ಮತ್ತೊಂದು ಅದ್ಭುತ ಪ್ರತಿದಾಳಿಯ ಅವಕಾಶವನ್ನು ಪಡೆದುಕೊಂಡಿತ್ತು. ಇಂಗ್ಲೆಂಡ್‌ ವಿರುದ್ಧ 2-1 ಮುನ್ನಡೆಗೆ ನಾರ್ವೆಗೆ ಉತ್ತಮ ಅವಕಾಶ ಇತ್ತು. ಸುಲಭವಾದ ಫಿನಿಶ್‌ಗಾಗಿ ಹಾಲೆಂಡ್‌ ತನಗೆ ಚೆಂಡನ್ನು ವರ್ಗಾಯಿಸುವಂತೆ ಕೇಳಿಕೊಂಡರೂ ಸೊರ್ಲೋತ್‌ ಸ್ವತಃ ತಾವೇ ಗೋಲು ಹೊಡೆಯಲು ಮುಂದಾಗುತ್ತಾರೆ. ತನ್ನ ಸ್ವಾರ್ಥ ನಿರ್ಧಾರದಿಂದ ಗೋಲು ಗಳಿಸುವಲ್ಲಿ ವಿಫಲರಾಗುತ್ತಾರೆ. ಈ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಸೊರ್ಲೋತ್‌ ನಡೆಗೆ ನಾರ್ವೆ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ

Share this article