ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಸಣ್ಣ ಸಣ್ಣ ಗುಳ್ಳೆಗಳಿಗೆ ಮತ್ತು ತುರಿಕೆಗೆ ಮನೆ ಮದ್ದು

Kaverinews | Published on: | Views: 69
ಅಮ್ಮನ ಮನೆ ಮದ್ದು
ಸಣ್ಣ ಸಣ್ಣ ಗುಳ್ಳೆಗಳಿಗೆ ಮತ್ತು ತುರಿಕೆಗೆ ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಹಾಗೂ ಶಾಲೆಗೆ ಹೋಗುವ ಮಕ್ಕಳು ಮತ್ತು ಚಿಕ್ಕ ಮಕ್ಕಳಲ್ಲಿ ಕೈಕಾಲುಗಳಲ್ಲಿ ಸಣ್ಣ ಸಣ್ಣ ಕಪ್ಪು ಗುಳ್ಳೆಗಳು ತುರಿಕೆ ಮತ್ತು ಜ್ವರ ಕಂಡುಬರುತ್ತದೆ ಕೆಲವರು ಇದನ್ನು ಅಮ್ಮ ಚಿಕನ್ ಫಾಕ್ಸ್ ಎಂದು ಪರಿಗಣಿಸುತ್ತಿದ್ದಾರೆ. ಮಳೆಗಾಲ ಕಳೆದು ಚಳಿಗಾಲ ಬರುವಾಗ ಈ ತೊಂದರೆ ಹೆಚ್ಚಿನ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಕಂಡುಬರುತ್ತದೆ ಇದು ಅಂಟು ರೋಗವು ಕೂಡ ಹೌದು ಮಕ್ಕಳಿಗೆ ಈ ರೀತಿ ತೊಂದರೆ ಕಂಡರೆ ತಕ್ಷಣ ಮೂರು ದಿನದ ಮಟ್ಟಿಗೆ ಸ್ಕೂಲಿಗೆ ರಜಾ ಹಾಕಿಸಬೇಕು. ಕಡಲೆ ಹಿಟ್ಟು ಹಾಕಿಸ್ನಾನ ಮಾಡಿಸಿ ಚೆನ್ನಾಗಿ ಒರೆಸಿಕೊಳ್ಳಬೇಕು ನಂತರ ಕಹಿಬೇವಿನ ಎಲೆ ಮತ್ತು ಹಸಿ ಅರಸಿನ ಚೆನ್ನಾಗಿ ಪೇಸ್ಟ್ ಮಾಡಿ ಒಂದು ಚಮಚ ಕುಡಿಯಲು ಕೊಟ್ಟು ಮಿಕ್ಕಿದನ್ನು ಮೈಯಿಗೆಲ್ಲ ಹಚ್ಚಬೇಕು ಒಣಗಿದ ನಂತರ ಒರೆಸಿ ತೆಗೆದು ಹಾಗೆ ಬಟ್ಟೆ ಹಾಕಿಕೊಳ್ಳಬೇಕು. ನಂಜು ಪದಾರ್ಥಗಳು ತಿನ್ನಬಾರದು . ಮಾಂಸಹಾರ ತ್ಯಜಿಸಬೇಕು. ನಾವು ಇರುವ ಪರಿಸರವನ್ನು ಸ್ವಚ್ಛ ಹಾಗೂ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಬೇಕು. ಡೆಟಾಲ್ ಹಾಕಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆದು ಸ್ವಚ…


ವನಿತಾ ಚಂದ್ರ ಮೋಹನ್

Share this article